ಮಾನವ ಇತಿಹಾಸದಲ್ಲಿ ಇಸ್ಲಾಮಿನಷ್ಟು ಚರ್ಚಿತವಾದ ವಿಷಯ ಬೇರೆ ಇರಲಿಕ್ಕಿಲ್ಲ. ವಿಷಾದವೆಂದರೆ ಚರ್ಚೆಗೆ ಗ್ರಾಸ ಒದಗಿಸಿದ್ದು ಭಯೋತ್ಪಾದನೆ.
ಸೆಪ್ಟೆಂಬರ್ ೧೧, ೨೦೦೧, ವಿಶ್ವವೇ ನಿಬ್ಬೆರಗಾಗುವಂತೆ ಮಾಡಿದ ಚರಿತ್ರೆಯಲ್ಲೇ ಕೇಳರಿಯದ, ಕಂಡರಿಯದ ಭೀಕರ ವೈಮಾನಿಕ ಆಕ್ರಮಣ ನ್ಯೂಯಾರ್ಕ್ನ ವಿಶ್ವ ವಾಣಿಜ್ಯ ಕೇಂದ್ರದ ಗಗನಚುಂಬಿ ಕಟ್ಟಡಗಳ ನೆಲಸಮ ಮಾಡಿ ಜಗತ್ತನ್ನೇ ತಲ್ಲಣಗೊಳಿಸಿತು. ಒಟ್ಟು ನಾಲ್ಕು ವಿಮಾನಗಳ ಅಪಹರಣದೊಂದಿಗೆ ಮಾಡಲಾದ ಈ ಆಕ್ರಮಣದ ಸೂತ್ರದಾರರು ದುರದೃಷ್ಟವಶಾತ್ ಅರಬ್ ಮುಸ್ಲಿಮರಾಗಿದ್ದೇ ಇಸ್ಲಾಮಿನ ಬಗ್ಗೆ ತಿಳಿಯುವ ಆತುರ ಜಗತ್ತಿಗೆ ಉಂಟಾಗಿದ್ದು. ಮುಸ್ಲಿಮರು ದೈವೀ ಧರ್ಮ ಎಂದು ನಂಬುವ, ೧೫೦ ಕೋಟಿಗೂ ಹೆಚ್ಚು ಅನುಯಾಯಿಗಳು ವಿಶ್ವದ ಮೂಲೆ ಮೂಲೆಗಳಲ್ಲಿ ಏಕದೇವೋಪಾಸನೆ ಮಾಡುವ ಧರ್ಮದ ಬಗ್ಗೆ ತಿಳಿಯಲು ಸಹಾಯ ಮಾಡಿದ್ದು ವಿಶ್ವವೆಂದೂ ಮರೆಯದ ದುರ್ಘಟನೆ ಎಂದರೆ ಅಚ್ಚರಿಯಾಗುತ್ತದೆ.
ರೂಪದಲ್ಲೂ ಸುಂದರಿಯಾದವಳು ತನ್ನ ಸೌಂದರ್ಯ ವೃದ್ಧಿ ಮತ್ತು ಅದನ್ನು ಕಾಪಾಡಲು ವ್ಯಾಯಾಮ ಮಾಡುತ್ತಾಳೆ. ಅಂತರಾಳದಲ್ಲಿ ಸುಂದರಿಯಾದವಳು ದೇವನಿಗೆ ಸಾಷ್ಟಾಂಗ ಎರಗುತ್ತಾಳೆ ತನ್ನ ಹೃದಯ ಸೌಂದರ್ಯ ಗೊಳಿಸಲು.
ಮೇಲಿನ ಮಾತುಗಳನ್ನು ೧೭ ರ ಪ್ರಾಯದ ಮುಸ್ಲಿಂ ತರುಣಿಯ ಬ್ಲಾಗ್ ನಿಂದ ಪಡೆದಿದ್ದು. ಇಸ್ಲಾಮಿನ ಸೌಂದರ್ಯಕ್ಕೆ ಮರುಳಾದ, ಅದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳಲು ತಹತಹಿಸುವ ಅಸಂಖ್ಯ ತರುಣಿಯರು, ಮಹಿಳೆಯರು ಬ್ಲಾಗ್ ಮಂಡಲದಲ್ಲೂ, ಜೇಡ ತಾಣಗಳಲ್ಲೂ ಸಿಗುತ್ತಾರೆ. ಈ ಮಹಿಳೆಯರ ಇಸ್ಲಾಮೀ ಪ್ರೇಮ ನೆಜಕ್ಕೂ ಶ್ಲಾಘನೀಯ.
ಪ್ರತಿಫಲಾಪೇಕ್ಷೆಯಿಲ್ಲದೆ ಬಿಡುವಿನ ಸಮಯದಲ್ಲಿ ಇಸ್ಲಾಮಿನ ಸೇವೆಗೈಯುವ ಈ ಯುವತಿಯರು ಎಲ್ಲರಿಗೂ ಮಾದರಿಯಾಗಲಿ.
November 18, 2011 – 8:36 pm
Categories: Uncategorized
|
Tagged ಅನುಕರಣೀಯ, ಆದರ್ಶ, ಇಸ್ಲಾಂ, ಉದಾತ್ತ, ಎಳೆ, ನೈಜ, ನೈಸರ್ಗಿಕ, ಪವಾಡ, ಮಾದರಿ, ಶ್ಲಾಘನೆ
|
ಹಜರತ್ ಅಲಿ ಇಬ್ನ್ ಅಬೀ ತಾಲಿಬ್ ಪ್ರವಾದಿ ಮುಹಮ್ಮದ್ (ಅವರ ಮೇಲೆ ದೇವನ ಅನುಗ್ರಹವಿರಲಿ) ರವರ ಅಳಿಯ. ಅಳಿಯನಿಗಿಂತಲೂ ಹೆಚ್ಚು ಆತ್ಮೀಯರೂ ಸಹ. ಅಲೀ ಎಳೆ ಪ್ರಾಯದಲ್ಲೇ ಪ್ರವಾದಿಗಳ ಸಂಗಾತಿಗಳಾಗಿದ್ದವರು, ಇಸ್ಲಾಂ ಧರ್ಮದ ದೀಕ್ಷೆ ಪಡೆದ ಮೊದಲ ವ್ಯಕ್ತಿಗಳಲ್ಲಿ ಒಬ್ಬರೂ ಹೌದು. ಒಮ್ಮೆ ಪ್ರವಾದಿಗಳು ಅಲಿ ಯವರನ್ನು ಕೇಳಿದರು, ಅಲೀ, ನಿಮಗೆ ಐದು ಸಾವಿರ ಕುರಿಗಳು ಬೇಕೋ? ಸಾತ್ವಿಕ ಬದುಕಿಗೆ ಬೇಕಾದ ಐದು ಸೂತ್ರಗಳೋ? ಅಲಿ ಮುಗುಳ್ನಗುತ್ತಾ ಹೇಳುತ್ತಾರೆ ಐದು ಸಾವಿರ ಕುರಿಗಳು ಅತಿಯಾದವು, ಆದರೆ ಬದುಕಿಗೆ ಬೇಕಾದ ಐದು ಸೂತ್ರಗಳು ನನಗೆ ಸಾಕು, ಅವನ್ನು ಹೇಳಿಕೊಡಿ ಎಂದಾಗ ಪ್ರವಾದಿಗಳು ನುಡಿಯುತ್ತಾರೆ,
೧.ದೇವ ಸ್ಮರಣೆ ಮತ್ತು ಪ್ರಾರ್ಥನೆ.. ಅಲ್ಲಾಹ್, ನನ್ನ ಪಾಪಗಳನ್ನು ಕ್ಷಮಿಸು,
೨. ನನ್ನನ್ನು ಹೊಂದಾಣಿಕೆ ಮಾಡಿಕೊಳ್ಳುವವರಲ್ಲಿ ಒಬ್ಬನನ್ನಾಗಿಸು,
೩. ನನ್ನ ದುಡಿಮೆ ನ್ಯಾಯಸಮ್ಮತವಾಗಿಸು,
೪. ನೀನು ನನಗೆ ಕೊಟ್ಟಿದ್ದರಲ್ಲಿ ತೃಪ್ತಿ ಪಡುವಂತೆ ಮಾಡು
೫. ಮತ್ತು ನೀನು ನನಗಾಗಿ ಏನನ್ನು ಬಯಸುವುದಿಲ್ಲವೋ ಆ ವಸ್ತುಗಳ ಕಡೆ ನನ್ನ ಮನಸ್ಸು ಹೊರಳದಂತೆ ಮಾಡು.
ವಿಶ್ವಾಸ, ಹೊಂದಾಣಿಕೆ, ನ್ಯಾಯಸಮ್ಮತ ದುಡಿಮೆ, ಇರುವುದರಲ್ಲಿ ತೃಪ್ತಿ, ಅತಿಯಾಸೆ ಪಡದಿರುವುದು ಇವು ಮೇಲಿನ ಪ್ರವಾದಿ ಸಂದೇಶದ ತಿರುಳು. ಸೃಷ್ಟಿ ಕರ್ತನ ಮೇಲಿನ ವಿಶಾಸ, ಜನರೊಂದಿಗೆ, ಅವರ ವಿಚಾರಗಳೊಂದಿಗೆ ಹೊಂದಾಣಿಕೆ, ನ್ಯಾಯವಾದ ದುಡಿಮೆ, ನಮಗಿರುವುದರಲ್ಲಿ ತೃಪ್ತಿ, ಮತ್ತು ನಮಗೆ ಬೇಡದ ವಿಷಯಗಳ ವಸ್ತುಗಳ ಕುರಿತು ಆಸಕ್ತಿ, ಈ ವಿಷಯಗಳ ಬಗ್ಗೆ ನಾವು ಜಾಗರೂಕರಾಗಿ ಬದುಕನ್ನು ನಡೆಸಿದರೆ ಅದೇ ಸಾತ್ವಿಕ ಬದುಕು ಅಲ್ಲವೇ?
November 18, 2011 – 8:23 pm
Categories: Uncategorized
|
Tagged ಅಲಿ, ಕುರಿ, ಕ್ಷಮೆ, ತಪ್ಪು, ಧರ್ಮ, ಪ್ರವಾದಿ, ಬದುಕು, ಬೇಡು, ಸಂಭಾಷಣೆ, ಸಾತ್ವಿಕ, ಸೂತ್ರ
|
ನೋಡಿ ಆನಂದಿಸಿ ಏಕದೇವೋಪಾಸನೆಯನ್ನು ಸಾರುವ ಮನೋಹರವಾದ ಮಸ್ಜಿದ್ ಗಳನ್ನು:
ಕೆಳಗಿನ ಮಸ್ಜಿದ್ ಇರುವುದು ಮಾಜಿ ಸೋವಿಎಟ್ ಒಕ್ಕೂಟದ ಅರ್ಮೇನಿಯ ದೇಶದಲ್ಲಿ
ಪಾಕಿಸ್ತಾನದ ಲಾಹೋರ್ ನಗರದ ಮಸ್ಜಿದ್
ಕುವೈತ್ ದೇಶದ “ಫಾತಿಮಾ” ಮಸ್ಜಿದ್

ಇಸ್ಲಾಮಿನಲ್ಲಿ ದಾನಕ್ಕೆ ಹೆಚ್ಚು ಪ್ರಾಧಾನ್ಯತೆ. ದಾನ ನಮ್ಮ ಪಾಪಗಳನ್ನು ತೊಳೆಯುವ ಒಂದು ಕ್ರಿಯೆ ಎಂದು ಧರ್ಮ ಗ್ರಂಥಗಳ ಅಭಿಪ್ರಾಯ. ದಾನ ಮಾಡಲು ನಾವು ಶ್ರೀಮಂತರಾಗಿಯೇ ಇರಬೇಕೆಂದಿಲ್ಲ. ಕೊಡಲು ಕೈಯಲ್ಲಿ ಏನಿಲ್ಲದಿದ್ದರೂ ಸಂಕಷ್ಟದಲ್ಲಿರುವವರನ್ನು ಸಂತೈಸುವುದು, ಸಾಂತ್ವನದ ನುಡಿಗಳನ್ನು ಆಡುವುದು, ಅಷ್ಟೇ ಏಕೆ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅವನನ್ನು ಕಂಡು ಮುಗುಳ್ನಗುವುದೂ ಸಹ ದಾನದ ಚೌಕಟ್ಟಿನಲ್ಲಿ ಬರುತ್ತದೆ. ಬಾಯಾರಿ ಸಾಯುವ ಅವಸ್ಥೆಯಲ್ಲಿದ್ದ ಒಂದು ನಾಯಿಗೆ ನೀರುಣಿಸಿದ ಒಂದೇ ಒಂದು ಕಾರಣಕ್ಕೆ ಓರ್ವ ವೇಶ್ಯೆಯನ್ನು ದೇವರು ಅವಳ ಎಲ್ಲಾ ತಪ್ಪುಗಳಿಂದ ಆಕೆಯನ್ನು ವಿಮುಕ್ತಿ ಪಡಿಸಿದ ಎಂದು ಇಸ್ಲಾಂ ಬೋಧಿಸುತ್ತದೆ. ಮನುಷ್ಯನಿಗೆ ತಾನು ಮಾಡಿದ ಮೂರು ಕಾರ್ಯಗಳು ಅವನನ್ನು ಪರಲೋಕದಲ್ಲಿ ರಕ್ಷಿಸುವುವು; ಅವೆಂದರೆ ತಾನು ನೀಡಿದ ಜ್ಞಾನ, ಮಾಡಿದ ದಾನ ಮತ್ತು ಸಮಾಜಕ್ಕೆ ನೀಡಿದ ಸನ್ನಡತೆಯ ಸಂತಾನ. ದಾಂಡ ಬಗ್ಗೆ ಮಾತನಾಡುತ್ತಾ ಓರ್ವ ಶೇಖ್ ಹೇಳುತ್ತಾರೆ. ದೇವರು ಆಪತ್ತುಗಳನ್ನು ಮಳೆಯ ಹನಿಗಳ ರೀತಿ ಕಳಿಸುತ್ತಾನೆ. ಈ ಆಪತ್ತುಗಳೆಂಬ ಹನಿಗಳಿಂದ ಕೂಡಿದ ಮಳೆಯಿಂದ ರಕ್ಷಿಸಿಕೊಳ್ಳಲು ನಾವು ದಾನದ ಕೊಡೆಯನ್ನು ಉಪಯೋಗಿಸಬೇಕು ಎಂದು. ಮನುಷ್ಯ ಇಹಲೋಕ ತ್ಯಜಿಸಿದಾಗ ಏನನ್ನೂ ಕೊಂಡು ಹೋಗುವುದಿಲ್ಲ, ದಾನದ ವಿನಃ.
ನೆರೆಹೊರೆಯವರ ಹಕ್ಕುಗಳ ಬಗ್ಗೆ ಒಮ್ಮೆ ಪ್ರವಾದಿಗಳು ಮಾತನಾಡುತ್ತಾ ಯಾವ ರೀತಿ ನಾವು ನಮ್ಮ ಅಕ್ಕಪಕ್ಕದಲ್ಲಿ ವಾಸವಿರುವವರ ಬಗ್ಗೆ ಕಾಳಜಿ ಇಡಬೇಕೆಂದು ತಮ್ಮ ಸಹವರ್ತಿಗಳಲ್ಲಿ ಹೇಳುತ್ತಿದ್ದರು. ಇದನ್ನು ಕೇಳುತ್ತಾ ಕುಳಿತಿದ್ದ ಪ್ರವಾದಿಗಳ ಸಹಚರರೊಬ್ಬರು ಹೇಳಿದರು, ನಾನು ಪ್ರವಾದಿಗಳ ಮಾತನ್ನು ತುಂಬಾ ಗಮನದಿಂದ ಕೇಳುತ್ತಿದ್ದೆ ಮತ್ತು ನನಗೆ ಗಾಭರಿ ಸಹ ಆಗುತ್ತಿತ್ತು ಏಕೆಂದರೆ ಪ್ರವಾದಿಗಳು ನೆರೆಹೊರೆಯವರ ಹಕ್ಕುಗಳ ಬಗ್ಗೆ ಇಷ್ಟೊಂದು ಹೇಳುತ್ತಾ ಎಲ್ಲಿ ನಮ್ಮ ಆಸ್ತಿಯಲ್ಲೂ ಪಾಲು ಮಾಡಿ ನೆರೆಯವನಿಗೆ ಕೊಡಬೇಕು ಎಂದು ಹೇಳುತ್ತಾರೋ ಎಂದು. ಒಮ್ಮೆ ಓರ್ವ ವ್ಯಕ್ತಿ ಬಂದು ಪ್ರವಾದಿಯವರಲ್ಲಿ ಹೇಳುತ್ತಾರೆ, ಪ್ರವಾದಿಗಳೇ, ಇಲ್ಲೊಬ್ಬ ಸ್ತ್ರೀ ಎಲ್ಲಾ ಹೊತ್ತು ನಮಾಜ್ ಮಾಡುತ್ತಾಳೆ, ದಾನ ಕೊಡುತ್ತಾಳೆ, ವೃತ ಆಚರಿಸುತ್ತಾಳೆ ಆದರೆ ಇಷ್ಟೆಲ್ಲಾ ಮಾಡುವ ಆಕೆ ತನ್ನ ನೆರೆಯವರೊಂದಿಗೆ ತುಂಬಾ ನಿಕೃಷ್ಟಳಾಗಿ ನಡೆದುಕೊಂಡು ತನ್ನ ಮಾತಿನಿಂದ ಅವರನ್ನು ನೋಯಿಸುತ್ತಾಳೆ ಎಂದು. ಇದ ಕೇಳಿದ ಪ್ರವಾದಿ ಹೇಳುತ್ತಾರೆ ” ಆಕೆಯ ಎಲ್ಲಾ ಒಳ್ಳೆ ಕಾರ್ಯಗಳೂ ಯಾವ ಫಲವಿಲ್ಲದೆ ಹೋದವು, ಆಕೆ ನರಕ ವಾಸಿಗಳ ಪೈಕಿ ಒಬ್ಬಳಾಗುತ್ತಾಳೆ ಎಂದು. ಮತ್ತೊಂದೆಡೆ ಪ್ರವಾದಿಗಳು ಹೇಳುತ್ತಾರೆ ” ಯಾವ ವ್ಯಕ್ತಿಯ ಸಹವಾಸದಿಂದ ಆತನ ನೆರೆಯ ವ್ಯಕ್ತಿ ಸುರಕ್ಷಿತನಿರುವುದಿಲ್ಲವೋ ಆ ವ್ಯಕ್ತಿ ( ತಂಟೆ ಮಾಡುವವ ) ಸ್ವರ್ಗ ಸೇರಲಾರ” ಹೌದು, ಇಷ್ಟು ಮಾತ್ರವಲ್ಲ, ನೆರೆಯವರು ಕಾಣುವಂತೆ ನಾವು ಮನೆಗೆ ವಸ್ತುಗಳನ್ನೂ ತರಕೂಡದು ಏಕೆಂದರೆ ನೆರೆಯವ ದಾರಿದ್ರ್ಯದಲ್ಲಿದ್ದರೆ ಅವನ ಮನಸ್ಸಿನಲ್ಲಿ ಅಸೂಯೆ ಮತ್ತು ಆಸೆ ಹುಟ್ಟಬಹುದು ಎಂದು ತಿಳಿಹೇಳಿ ನಮ್ಮ ಬದುಕಿನಲ್ಲಿ ನಾವೆಷ್ಟು ಜಾಗರೂಕತೆಯಿಂದ ಇರಬೇಕೆಂಬುದನ್ನು ಸುಂದರವಾಗಿ ಇಸ್ಲಾಂ ಸಾರುತ್ತದೆ.
ಒಂದೇ ಗಂಡು ಮತ್ತು ಹೆಣ್ಣಿನ ಜೋಡಿಯಿಂದ ನಾವು ಮನುಕುಲವನ್ನು ಸೃಷ್ಟಿಸಿದೆವು. ಮತ್ತು ನೀವು ಪರಸ್ಪರ ಅರಿತು ಬಾಳಲು ನಿಮ್ಮನ್ನು ಬುಡಕಟ್ಟುಗಳನ್ನಾಗಿ ಮಾಡಿದೆವು. ಖಂಡಿತವಾಗಿಯೂ ದೇವರ ಮೇಲೆ ಭಕ್ತಿ ಮತ್ತು ಭಯ ಉಳ್ಳವನೇ ದೇವನ ದೃಷ್ಟಿಯಲ್ಲಿ ಉದಾತ್ತನು.
ಪವಿತ್ರ ಕುರಾನ್ ( 49-13)
ನಾವು ಈ ಘಳಿಗೆಯಲ್ಲಿ ಬದುಕುತ್ತಿರುವ ವಿಶ್ವದಲ್ಲಿ ಜನಗಳ ನಡುವೆ ಪರಸ್ಪರ ಅಪನಂಬಿಕೆ, ವೈರತ್ವ, ಅಸಹನೆ, ಹಗೆ ತುಂಬಿದ್ದು ಅಶಾಂತಿ ತುಂಬಿದ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಮೇಲೆ ಹೇಳಿದ ಸೂಕ್ತದಲ್ಲಿ ದೇವರು ಸ್ಪಷ್ಟವಾಗಿ ಹೇಳುತ್ತಾನೆ ನಾನು ನಿಮ್ಮನ್ನು ವಿವಿಧ ಪಂಗಡಗಳಾಗಿ, ಬುಡಕಟ್ಟುಗಳಾಗಿ ಸೃಷ್ಟಿಸಿದ್ದು ನೀವು ಒಬ್ಬರೊನ್ನೊಬ್ಬರು ಅರಿತು ಸಾಮರಸ್ಯದಿಂದ ಬಾಳಲೆಂದು. ಆದರೆ ಈಗ ಆಗುತ್ತಿರುವುದೋ? ಕೇವಲ ಒಬ್ಬ ಆಡುವ ಕಟು ಮಾತಿಗೆ ಇಂದು ಬಹು ದೊಡ್ಡ ಕಲಹವೇ ಆರಂಭವಾಗಿ ಬಿಡುತ್ತದೆ. ಭಾಷೆ, ಗಡಿ ಹೀಗೆ ನಾವೇ ಸೃಷ್ಟಿಸಿಕೊಂಡ ವಿಷಯಗಳ ಮೇಲೆ ಒಬ್ಬರನ್ನೊಬ್ಬರ ಮೇಲೆ ಹರಿಹಾಯುತ್ತೇವೆ. ಮತ್ತೊಂದೆಡೆ ಎಲ್ಲವನ್ನೂ ಪಡೆದುಕೊಂಡ ಅಂದರೆ ಶ್ರೀಮಂತ ವರ್ಗ ತನಗಿಂತ ಕೆಳ ದರ್ಜೆಯಲ್ಲಿ ಹುಟ್ಟಿ ಒಂದು ಹೊತ್ತಿನ ಅನ್ನಕ್ಕೂ ಹಪಹಪಿಸುತ್ತಿರುವವರ ಮೇಲೆ ಕನಿಕರ ತೋರದೆ ದರ್ಪದಿಂದ ಬದುಕುತ್ತಾರೆ. ಇದಕ್ಕೆಲ್ಲ ಕಾರಣ ನಮ್ಮ ಅರಿವಿನ ಕೊರತೆ. ಅರಿತು ಬಾಳಲು ನಮ್ಮ ಮನಸ್ಸು ಒಪ್ಪದಿರುವುದು. ಅರಿತವ ಬಹಳ ನಾಜೂಕಿನಿಂದ ಕ್ಷುಲ್ಲಕ ಸಮಸ್ಯೆಗಳಿಗೆ, ಕಲಹಕ್ಕೆ ಕಿವಿಗೊಡದೆ ಸಮಾಜದ ಒಳಿತಿಗಾಗಿ ಶ್ರಮಿಸುತ್ತಾನೆ. ಶ್ರೀಮಂತ, ಬಡವನ ನೋವನ್ನು ಅರಿತು ಅವನ ಸಹಾಯಕ್ಕೆ ದೌಡಾಯಿಸುತ್ತಾನೆ.
ಅರಿತು ಬಾಳುವತ್ತ ಕುರಾನಿನ ನಿರ್ದೇಶನ ಎಷ್ಟು ಅರ್ಥಪೂರ್ಣ.
ಈ ನಾಲ್ಕು ಗುಣಗಳು ಒಬ್ಬನಲ್ಲಿದ್ದರೆ ಅವನಿಗೆ ಈ ಪ್ರಪಂಚದಲ್ಲಿ ಯಶಸ್ಸು ಸಿಗುತ್ತದೆ:
೧. ವಿಶ್ವಾಸ, ನಂಬುಗೆ ಕಾಪಾಡುವುದು.
೨. ಮಾತಿನಲ್ಲಿ ಪ್ರಾಮಾಣಿಕತೆ.
೩. ಭೂಷಣಪ್ರಾಯ ನಡವಳಿಕೆ.
೪. ಮತ್ತು ನ್ಯಾಯಯುತ ಸಂಪಾದನೆ.
“ನಿಮ್ಮನ್ನು ನೀವು ನರಕದಿಂದ ರಕ್ಷಿಸಿಕೊಳ್ಳಿ ಕನಿಷ್ಠ ಅರ್ಧ ಖರ್ಜೂರವನ್ನಾದರೂ ದಾನವಾಗಿ ನೀಡುವ ಮೂಲಕ ಮತ್ತು ಅದೂ ನಿಮಗೆ ಅಸಾಧ್ಯವಾದರೆ ಒಳ್ಳೆಯ ಮಾತನ್ನಾಡುವ (ಸನ್ನುಡಿ) ಮೂಲಕ”.
ಪ್ರವಾದಿ ಮುಹಮ್ಮದ್ ( ಸಲ್ಲಲ್ಲಾಹು ಅಲೈಹಿ ವಸಲ್ಲಂ )
ದಾನದ ಬಗ್ಗೆ ವ್ಯಕ್ತಿತ್ವವನ್ನು ಸುಂದರವಾಗಿಸಿಕೊಳ್ಳುವ ಬಗ್ಗೆ ಇಸ್ಲಾಂ ಹೇಳಿದಷ್ಟು ಬೇರಾವ ಧರ್ಮವೂ ಹೇಳಿರಲಾರದು. ಸಂಪೂರ್ಣ ಅರೇಬಿಯಾ ತನ್ನ ಕಾಲಡಿಗೆ ಬಿದ್ದಿದ್ದರೂ, ಕಿರೀಟವಿಲ್ಲದ ಚಕ್ರವರ್ತಿಯಾದರೂ ತನ್ನಲ್ಲಿರುವ ಎಲ್ಲವನ್ನೂ ಬಡವರಿಗೆ ಕೊಡುತ್ತಿದ್ದ ಪ್ರವಾದಿ ಬಡವರ ಕಷ್ಟಕ್ಕೆ ತೀವ್ರವಾಗಿ ಸ್ಪಂದಿಸುತ್ತಿದ್ದರು.
ಇಸ್ಲಾಂ ಧರ್ಮದ ಐದು ಅಡಿಗಲ್ಲುಗಳಲ್ಲಿ ಮೂರನೆಯದು ದಾನ.

ಇಸ್ಲಾಮಿನ ಹರಡುವಿಕೆ ಖಡ್ಗದ ಮತ್ತು ಯುದ್ಧಗಳ ಸಹಾಯದಿಂದ ಆಯಿತು ಎನ್ನುವ ಬಾಲಿಶ ತರ್ಕಗಳಿಗೆ ಉತ್ತರ ಚರಿತ್ರೆಯಲ್ಲಿ ನಮಗೆ ನೂರಾರು ಸಿಗುತ್ತವೆ. ಇತ್ತೀಚಿಗೆ ಇಂಡೋನೇಷ್ಯಾ ಪ್ರವಾಸ ಮಾಡಿದ ಅಮೆರಿಕೆಯ ವಿದೇಶಾಂಗ ಕಾರ್ಯದರ್ಶಿ ಹಿಲೆರಿ ಕ್ಲಿಂಟನ್ ಹೇಳಿದ್ದು ಹೀಗೆ: “If you want to know if Islam, democracy, modernity and women’s rights can coexist, go to Indonesia.
ಪ್ರಜಾಪ್ರಭುತ್ವ, ಆಧುನಿಕತೆ ಮತ್ತು ಮಹಿಳೆಯರ ಹಕ್ಕು ಇವುಗಳು ಇಸ್ಲಾಂ ಧರ್ಮದೊಂದಿಗೆ ಸಹಯೋಗದಿಂದ ಇರುವುದನ್ನು ಕಾಣಬೇಕೆಂದರೆ ಇಂಡೋನೇಷ್ಯಾ ಭೇಟಿ ನೀಡಿ ಎಂದು. ವಿಶ್ವದಲ್ಲೇ ಅತಿ ಹೆಚ್ಚು ಮುಸ್ಲಿಮರಿರುವ ಇಸ್ಲಾಮೀ ರಾಷ್ಟ್ರ ಇಂಡೋನೇಷ್ಯಾ. ಈ ದೇಶಕ್ಕೆ ಅರಬ್ ಯುದ್ಧಕೊರರು ಒಂಟೆಯ ಮೇಲೋ, ಕುದುರೆ ಏರಿಯೋ ಖಡ್ಗ ಗುರಾಣಿ ಹಿಡಿದು ಇಸ್ಲಾಮಿನ ದರ್ಶನ ಮಾಡಿಸಲಿಲ್ಲ. ಬದಲಿಗೆ ಶಾಂತಿಯ ಸಂದೇಶ, ಏಕದೆವನ ಆರಾಧನೆ, ಪುರೋಹಿತರಹಿತ ಧರ್ಮವ್ಯವಸ್ಥೆ ಇವುಗಳ ಸಹಾಯದಿಂದ ಇಸ್ಲಾಮಿನ ಕಂಪನ್ನು ಹಾರಾಡಿದರು ವ್ಯಾಪಾರಕ್ಕಾಗಿ ಅನ್ಯದೆಶಗಳಿಂದ ಮುಸ್ಲಿಮರು. ಸಾಮನ್ಯ ಬುದ್ಧಿಶಕ್ತಿ ಮತ್ತು ಅವಲೋಕನದ ಸಹಾಯದಿಂದ ವಿಶ್ವವನ್ನು ಮತ್ತು ಸೃಷ್ಟಿಕರ್ತನನ್ನು ಕಾಣಲು ಪ್ರೇರೇಪಣೆ ಇಸ್ಲಾಮಿನಿಂದ ಜನಗಳಿಗೆ ಸಿಕ್ಕಿತು. ಈ ಗುಣಗಳೇ ಇಸ್ಲಾಂ ಖಂಡ ಖಂಡಗಳಿಗೆ ಪಸರಿಸಲು ಸಹಾಯ ಮಾಡಿದವು.
“Indonesia embodies the added value of cultural diversity and can become the bridge between the West and Islam on the road to world peace,”
ಸಾಂಸ್ಕೃತಿಕ ವಿಭಿನ್ನತೆ ಯೊಂದಿಗೆ ತನ್ನ ಹಿರಿಮೆ ಹೆಚ್ಚಿಸಿಕೊಂಡ ಇಂಡೋನೇಷ್ಯಾ ಶಾಂತಿ ಹರಡುವ ನಿಟ್ಟಿನಲ್ಲಿ ಪಶ್ಚಿಮ ಜಗತ್ತು ಮತ್ತು ಇಸ್ಲಾಮಿನ ನಡುವೆ ಸೇತುವೆ ಆಗಬಲ್ಲುದು ಎಂದು ಇಟಾಲಿಯ ರಾಯಭಾರಿಯೊಬ್ಬರು ಅಭಿಪ್ರಾಯಪಟ್ಟರು. ಅಂದರೆ ಶೇಕಡಾ ೮೫ ಕ್ಕೂ ಹೆಚ್ಚು ಮುಸ್ಲಿಮರನ್ನು ಹೊಂದಿರುವ, ತನ್ನ ಮಧ್ಯೆ ಹಿಂದೂಗಳನ್ನೂ, ಬೌದ್ಧರನ್ನೂ, ಕ್ರೈಸ್ತರನ್ನೂ ಇಟ್ಟುಕೊಂಡು ಸಹಬಾಳ್ವೆ ನಡೆಸುತ್ತಿರುವ ಇಂಡೋನೇಷ್ಯಾ ಏಕೆ ತಾಲಿಬಾನಿಗಳ ಸಂತೆ ಆಗಲಿಲ್ಲ? ರಾಜಕೀಯ ಕಾರಣಗಳಿಗಾಗಿ ರಕ್ತ ಪಾತ ಹರಿಸುತ್ತಿರುವ ತಾಲಿಬಾನಿಗಳು ಇಸ್ಲಾಮನ್ನು ಪ್ರತಿನಿಧಿಸಲು ಸಾಧ್ಯವಿಲ್ಲ.
ಧರ್ಮದ ವಿಷಯದಲ್ಲಿ ಬಲವಂತ ಬೇಡ, ( ಪವಿತ್ರ ಕುರಾನ್, ೨:೨೫೬ ): ದೇವನ ಮಾರ್ಗದಲ್ಲಿ ಜನರನ್ನು ಸುಂದರವಾದ ಪ್ರವಚನದಿಂದ ಆಮಂತ್ರಿಸಿ. ( ಪವಿತ್ರ ಕುರಾನ್, ೧೬:೧೨೫ ) ಈ ಸೂಕ್ತಗಳನ್ನು ಹೊಂದಿದ ದೇವನ ಗ್ರಂಥ ಭಯೋತ್ಪಾದನೆಯನ್ನು ಪ್ರಚೋದಿಸಲು ಹೇಗೆ ಸಾಧ್ಯ?